ಎಲ್‌ಪಿಜಿ ದರ ಏರಿಕೆ ಶಾಕ್: ಇಸ್ರೇಲ್-ಇರಾನ್ ಸಂಘರ್ಷದ ನಡುವೆ ವಾಣಿಜ್ಯ ಸಿಲಿಂಡರ್ ಬೆಲೆ ₹993 ಹೆಚ್ಚಳ.

ನವದೆಹಲಿ, ಮೇ 1, 2026: ಹೋಟೆಲ್ ಮತ್ತು ಸಣ್ಣ ಉದ್ದಿಮೆದಾರರಿಗೆ ದೊಡ್ಡ ಆಘಾತ ಎದುರಾಗಿದೆ. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಬರೊಬ್ಬರಿ ₹993 ರಷ್ಟು ಏರಿಕೆ ಮಾಡಿವೆ. ಇದು ಕಳೆದ ಮೂರು ತಿಂಗಳಲ್ಲೇ ಸಂಭವಿಸಿದ ಅತಿದೊಡ್ಡ ಏರಿಕೆಯಾಗಿದ್ದು, ಪ್ರಮುಖ ನಗರಗಳಲ್ಲಿ ಸಿಲಿಂಡರ್ ಬೆಲೆ ₹3,000 ಗಡಿ ದಾಟಿದೆ.

ಬೆಲೆ ಏರಿಕೆಗೆ ಕಾರಣವೇನು?
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಭಾರತದ ಶೇ. 90ರಷ್ಟು ಎಲ್‌ಪಿಜಿ ಆಮದು ಹಾದುಹೋಗುವ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಉಂಟಾಗಿರುವ ಅಡೆತಡೆಗಳು ಪೂರೈಕೆಯಲ್ಲಿ ಕೊರತೆಯನ್ನು ಉಂಟುಮಾಡಿದೆ. ಇದರಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲದ ಬೆಲೆ ಗಗನಕ್ಕೇರಿದೆ.
ಪ್ರಮುಖ ನಗರಗಳಲ್ಲಿನ ಹೊಸ ದರಗಳು:
1) ಬೆಂಗಳೂರು: ₹3,115 (₹992 ಹೆಚ್ಚಳ)
2) ದೆಹಲಿ: ₹3,071.50 (₹993 ಹೆಚ್ಚಳ)
3) ಮುಂಬೈ: ₹3,024.00 (₹993 ಹೆಚ್ಚಳ)
ಮನೆಬಳಕೆಯ ಸಿಲಿಂಡರ್ (14.2 ಕೆಜಿ) ಬೆಲೆಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಇದು ಸಾಮಾನ್ಯ ಜನರಿಗೆ ತುಸು ಸಮಾಧಾನ ತಂದಿದೆ.

207 Views 2 Comments
2 Comments
Oldest
Newest Most Voted
Scroll to Top
2
0
Don’t just read… say something!x
()
x